ನಮ್ಮ ಕಟ್ಟದ ಸಮೀಪವಿರುವ ಅರಣ್ಯಕ್ಕೆ ಬೆತ್ತವನ್ನು ಕೆಲವು ವರ್ಷಗಳ ಹಿಂದೆ ನೆಡಲಾಗಿದೆ ..ಈ ಬೆತ್ತದ ಮುಳ್ಳಿಗೆ ಸಿಕ್ಕಿ ಹಲವಾರು ಪ್ರಾಣಿಗಳ ರಕ್ತ ಸುರಿಯುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ ..ಬೆತ್ತಗಳು ಮರಗಳಿಗೆ ಹಬ್ಬಿ ಅಡಿ ನಿಂದ ಬರುವ ಸಣ್ಣ ಗಿಡಗಳನ್ನು ಈ ಬೆತ್ತಗಳು ಮೇಲಗಡೆ ಬರದ ಹಾಗೆ ಮಾಡುತ್ತವೆ ..ಹೀಗೆ ಆದರೆ ಮುಂದೆ ಅರಣ್ಯವೇ ಸರ್ವನಾಶ ಆಗಬಹುದು .ಇದಕ್ಕೆ ಸಂಬಂಧಪಟ್ಟವರು ಕೂಡಲೇ ಆ ಬೆತ್ತವನ್ನು ನಾಶಮಾಡುವ ಮೂಲಕ ಕ್ರಮ ಕೈಗೊಳ್ಳಬಹುದು ಎಂದು ಈ ಮೂಲಕ ತಿಳಿಸ ಪಡಿಸುತ್ತೇನೆ .ಇದು ನನ್ನ ಸ್ವಂತ ಅಭಿಪ್ರಾಯ ..
Monday, 5 July 2021
ನಮ್ಮ ಕಟ್ಟದ ಸಮೀಪವಿರುವ ಅರಣ್ಯಕ್ಕೆ ಬೆತ್ತವನ್ನು ಕೆಲವು ವರ್ಷಗಳ ಹಿಂದೆ ನೆಡಲಾಗಿದೆ ..ಈ ಬೆತ್ತದ ಮುಳ್ಳಿಗೆ ಸಿಕ್ಕಿ ಹಲವಾರು ಪ್ರಾಣಿಗಳ ರಕ್ತ ಸುರಿಯುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ
ಎರಡುವರೆ ಸಾವಿರ ಎಕ್ರೆಯಿಂದ ಒಂದೂವರೆ ಲಕ್ಷ ಆದಾಯ . ಗೇರು ತೋಟದ ಕಥೆಯಲ್ಲ ವ್ಯಥೆ..!
Sunday, 4 July 2021
jeevamrutha ಜೀವಾಮೃತ natural farming ಸಹಜ ಕೃಷಿ
jeevamrutha ಜೀವಾಮೃತ natural farming ಸಹಜ ಕೃಷಿ
ಸಹಜ ಕೃಷಿ ಗೆ ಉಪಯೋಗಿಸುವ ಜೀವಾಮೃತ ದ ಬಗ್ಗೆ ವಿಡಿಯೋ ಜೀವಾಮೃತಕ್ಕೆ ಬೇಕಾದ ಸಾಮಾಗ್ರಿಗಳು 2 ಕೆಜಿ ಕಪ್ಪು ಬೆಲ್ಲ 2 ಕೆಜಿ ದ್ವಿದಳ ಧಾನ್ಯ ಯಾವುದೇ ಹಿಟ್ಟು..ಇಲ್ಲಿ ಕಡಲೆಹಿಟ್ಟು ಉಪಯೋಗಿಸಲಾಗಿದೆ . ಹತ್ತು ಲೀಟರ್ ದೇಸಿ ದನದ ಗಂಜಲ ಹತ್ತು ಕೆಜಿ ದೇಸಿ ದನದ ಸೆಗಣಿ ಸ್ವಲ್ಪ ಕೃಷಿ ಮಾಡುವ ಭೂಮಿಯ ಫಲವತ್ತಾದ ಮಣ್ಣು .ಯಾವುದೇ ರಾಸಾಯನಿಕ ಗಳನ್ನು ಬೆರಸದ ಮಣ್ಣು . ಇನ್ನೂರು ಲೀಟರ್ ನೀರಿನ ಬ್ಯಾರಲ್ ಇನ್ನೂರು ಲೀಟರ್ ಜೀವಾಮೃತವನ್ನು 1ಎಕ್ರೆ ಕೃಷಿಗೆ ಬಳಸಬಹುದು. ನನಗೆ ತಿಳಿದಿರುವ ಅಲ್ಪ ಜ್ಞಾನದಿಂದ ಈ ವಿಡಿಯೋವನ್ನು ಮಾಡಿದ್ದೇನೆ .ಏನಾದರೂ ತಪ್ಪುಗಳಿದ್ದರೆ ಕ್ಷಮಿಸಿ ಸರಿಪಡಿಸಿ . ಮಾತುಗಾರಿಕೆ ಚೆನ್ನಾಗಿ ಇಲ್ಲದಿದ್ದರೆ ಕ್ಷಮಿಸಿ .ನಾನು ಮಾತುಗಾರಿಕೆಯನ್ನು ಇನ್ನೂ ಯೂಟ್ಯೂಬ್ ಚಾನೆಲ್ಗೆ ಗಾಗಿ ಕಲಿಯುತಿದ್ದೇನೆ ಅಷ್ಟೆ. ಧನ್ಯವಾದಗಳು ಷಣ್ಮುಖ ಕಟ್ಟ . ಎಗ್ರಿಕಲ್ಚರ್ ಡೆಸ್ಕ್
.ನಾವು ಆಹಾರ ಬೆಳೆ ಬೆಳೆಯುವ ಗದ್ದೆಗಳಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಶುರು ಮಾಡಿದ್ದು ವಿಪರ್ಯಾಸವೇ ಸರಿ.
ಬರಹ : ಷಣ್ಮುಖ ಕಟ್ಟ
ಇದು ನನ್ನ ಸ್ವಂತ ಅಭಿಪ್ರಾಯ ತಪ್ಪಾಗಿದ್ದರೆ ಕ್ಷಮಿಸಿ ..
ಐರ್ಲೆಂಡ್ ದೇಶದಲ್ಲಿ ಹಿಂದೆ ಹಣ ಬರುತ್ತದೆ ಎಂದು ಹೆಚ್ಚಿನವರು ಏಕ ಬೆಳೆ ಬೆಳೆದು ..ಹತ್ತು ಲಕ್ಷ ಜನರು ಆಹಾರದ ಕೊರತೆಯನ್ನು ಎದುರಿಸಿದರು .ಅದೇ ರೀತಿ ನಾವೂ ಕೂಡ ಏಕ ಬೆಳೆ ಆಹಾರ ಬೆಳೆ ಬೆಳೆಯಬಾರದು ವಿವಿಧ ಬೆಳೆಗಳನ್ನು ಬೆಳೆಯಬೇಕು .ಉದಾಹರಣೆಗಾಗಿ ಎಲ್ಲರೂ ಹೆಚ್ಚು ಹಣ ಬರುತ್ತದೆ ಎಂದು ವಾಣಿಜ್ಯ ಬೆಳೆಗಳನ್ನು ಬೆಳೆದರೆ ಏನಾಗಬಹುದು ?ಆದ್ದರಿಂದ ವಾಣಿಜ್ಯ ಬೆಳೆಗಳು ಬೇಕು ಉದಾಹರಣೆ ಅಡಿಕೆ ರಬ್ಬರ್ ಎಷ್ಟು ಬೇಕೋ ಅಷ್ಟು ಇರಲಿ .
ಜೈ ಭಾರತ್ .
Saturday, 3 July 2021
ರೈತರ ಬೆಳೆ ಗಳಾದ ತರಕಾರಿ ಬೇಳೆಕಾಳು ದವಸ ಧಾನ್ಯ ಗೆಡ್ಡೆಗೆಣಸು ಗಳ ಬೆಲೆ ಕಡಿಮೆಯಾಗಲು ಮತ್ತು ಬೇಡಿಕೆ ಇಲ್ಲದಿರಲು ನಾನು ಕೆಳಗಡೆ ವಿವರಿಸುವ ಕ್ರಮದಿಂದ ಕೂಡ ಆಗಿರಬಹುದು
ರೈತರ ಬೆಳೆ ಗಳಾದ ತರಕಾರಿ ಬೇಳೆಕಾಳು ದವಸ ಧಾನ್ಯ ಗೆಡ್ಡೆಗೆಣಸು ಗಳ ಬೆಲೆ ಕಡಿಮೆಯಾಗಲು ಮತ್ತು ಬೇಡಿಕೆ ಇಲ್ಲದಿರಲು ನಾನು ಕೆಳಗಡೆ ವಿವರಿಸುವ ಕ್ರಮದಿಂದ ಕೂಡ ಆಗಿರಬಹುದು .ಮೂವತ್ತು ವರ್ಷಗಳ ಹಿಂದಿನಿಂದ ನನ್ನ ತಂದೆ ತರಕಾರಿ ಕೃಷಿ ಮಾಡುತ್ತಾ ಬರುತ್ತಿದ್ದರು .ಈಗ 2ವರ್ಷದಿಂದ ಬಿಟ್ಟಿದ್ದಾರೆ .ನಾನು ಮುಂದುವರಿಸುತ್ತಾ ಇದ್ದೇನೆ .ತಂದೆಯವರು ಕೆಮಿಕಲ್ ಕೃಷಿ ಮಾಡುತ್ತಿದ್ದರು .ನಾನು ಪ್ರಸ್ತುತ ನೈಸರ್ಗಿಕ ಕೃಷಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ .ನಾನು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ತರಕಾರಿಗಳನ್ನು ಖರೀದಿ ಮಾಡಲು ವ್ಯಾಪಾರಸ್ಥರು ಮನೆಗೆ ಬರುತ್ತಿದ್ದರು .ಈಗಲೂ ನನಗೆ ನೆನಪಿದೆ ಇಪ್ಪತ್ತೈದು ವರ್ಷದ ಹಿಂದೆ ಸುಳ್ಯ ತಾಲ್ಲೂಕಿನ ಪಂಜ ದ ಗೋವಿಂದ ಪೈ ರವರು ಅವರ ಬೇಕರಿ ಮತ್ತು ತರಕಾರಿ ಅಂಗಡಿ ಈಗಿರುವ ಪಂಜ ಬಸ್ ಸ್ಟಾಂಡಿನ ಹಿಂದಿನ ಹಳೆಯ ಕಟ್ಟಡದಲ್ಲಿತ್ತು .ಅವರು ತರಕಾರಿಯ ಡಿಮಾಂಡ್ ಹೆಚ್ಚಿದಾಗ ಮನೆಗೆ ಬಂದು ತರಕಾರಿ ಕೊಂಡು ಹೋದ ನೆನಪು ನನಗೆ ಈಗಲೂ ಇದೆ .ನಮಗೆ ವರ್ಷದಲ್ಲಿ ಮೂವತ್ತರಿಂದ ನಲವತ್ತು ಕಿಂಟ್ವಾಲ್ ಬದನೆಕಾಯಿ ಮಾತ್ರವೇ ಆಗುತ್ತಿತ್ತು ಬೆಂಡೆಕಾಯಿ ತೊಂಡೆಕಾಯಿ ಹರಿವೆ ಊರು ಸೌತೆ ಮುಳ್ಳುಸೌತೆ ಹಾಗಲಕಾಯಿ ಹೀರೆಕಾಯಿ ಹೀಗೆ ಹಲವಾರು ಬಗೆಯ ತರಕಾರಿಗಳನ್ನು ಬೆಳೆಯಲಾಗುತ್ತಿತ್ತು .ನನ್ನ ತಂದೆ ಒಬ್ಬರಲ್ಲ ಊರಿನಲ್ಲಿ ಹಲವಾರು ಮಂದಿ ವ್ಯಾಪಾರಕ್ಕೋಸ್ಕರ ತರಕಾರಿಗಳನ್ನು ಬೆಳೆಯುತ್ತಿದ್ದರು .ಆದರೂ ಎಲ್ಲರ ತರಕಾರಿಗಳು ಸೇಲ್ ಆಗುತ್ತಿತ್ತು ನಮ್ಮ ಹತ್ತಿರದ ಪೇಟೆ ಗಳಲ್ಲಿ .ನಾನು ಕೂಡ ಶಾಲೆಗೆ ಹೋಗುವಾಗ ತಂದೆಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೆ .ನನಗೆ ಕೃಷಿಯಲ್ಲಿ ಆಸಕ್ತಿ ಬರಲು ತಂದೆ ಕಾರಣ .ಈಗ ಮಾಂಸ ಆಹಾರಕ್ಕಾಗಿ ಬೇಡಿಕೆ ಹೆಚ್ಚಿದ್ದು ಸಸ್ಯ ಆಹಾರಕ್ಕೆ ಬೇಡಿಕೆ ಕುಸಿದಿದೆ .ಇದರಿಂದ ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದೆ ಬೇಡಿಕೆ ಕುಸಿಯಲು ಇದೂ 1 ಕಾರಣ ಇರಬಹುದು .ಈಗ ಕೆಲವು ಮನೆಗಳಲ್ಲಿ ವಾರದ ಎಲ್ಲಾ ದಿನಗಳಲ್ಲಿ ಮಾಂಸ ಆಹಾರ ಮಾಡುವವರಿದ್ದಾರೆ .ಹಿಂದೆ 2 ತಿಂಗಳಿಗೊಮ್ಮೆ ಅದು ಇಲ್ಲ ಯಾರಾದ್ರು ನೆಂಟರು ಬಂದರೆ ಮಾತ್ರ ಊರಿನ ಕೋಳಿ ಸಾರು .ಉಳಿದ ಎಲ್ಲ ದಿನಗಳಲ್ಲಿ ತರಕಾರಿ ಪದಾರ್ಥ . ಹೀಗೆ ಮುಂದುವರಿದರೆ ಮುಂದಿನ ವರ್ಷಗಳಲ್ಲಿ ಮಾಂಸ ಆಹಾರ 1 ಎಲ್ಲರ ಫ್ಯಾಷನ್ ಆಗಬಹುದು . ಸಸ್ಯ ಆಹಾರ ಪ್ರಾಚೀನ ಕಾಲದಿಂದಲೂ ತಿನ್ನುತ್ತಿದ್ದ ವರ್ಗದವರು ಮಾತ್ರ ತಿನ್ನುವ ಪರಿಸ್ಥಿತಿ ಬರಬಹುದು .ಶುದ್ಧ ಸಸ್ಯ ಆಹಾರದ ಕೊರತೆ ಉಂಟಾಗಬಹುದು .ನನ್ನ ಫ್ರೆಂಡ್ ಫ್ರಾನ್ಸಿನ ನೀಸ್ ನಲ್ಲಿ ಕೆಲಸ ಮಾಡು ತ್ತಿದ್ದ ಅವನು ಹೇಳುತ್ತಿದ್ದ ಅಲ್ಲಿ ಮಾಂಸ ಆಹಾರ 1 ಫ್ಯಾಷನ್ ಆಗಿದೆ ಅಂತೆ .ದಿನದ ಹೆಚ್ಚಿನ ಹೊತ್ತು ಗಳಲ್ಲಿ ಮಾಂಸ ಆಹಾರವನ್ನು ತಿನ್ನುವವರು ಜಾಸ್ತಿಯಂತೆ .ನಾನು ಯಾರಿಗೂ ಕೂಡ ಮಾಂಸ ಆಹಾರವನ್ನು ತ್ಯಜಿಸಲು ಹೇಳುತ್ತಿಲ್ಲ .ನಾನು ಮಾತ್ರ ಮಾಂಸ ಆಹಾರ ಉತ್ತಮಇಲ್ಲ ಎಂದು ತಿಳಿದು ತ್ಯಜಿಸಿದ್ದೇನೆ .ಸುಭಾಷ್ ಪಾಳೇಕರ್ ಅವರು ಹೇಳುತ್ತಾರೆ ಅವರ ಜೀವಾಮೃತ ನೈಸರ್ಗಿಕ ಕೃಷಿಗೆ ಸಸ್ಯ ಆಹಾರ ಮಾನವನ ಮೂತ್ರವನ್ನು ಕೂಡ ಬಳಸಬಹುದು ಎಂದು ಹೇಳಿದ್ದಾರೆ .ಆದ್ದರಿಂದ ಅವರು ಸಸ್ಯ ಆಹಾರ ಉತ್ತಮವೆಂದು ಕಂಡು ಕೊಂಡಿದ್ದಾರೆ .ನನ್ನ ಚಿಂತನೆ ಪ್ರಕಾರ ಪ್ರಕೃತಿ ಶಕ್ತಿ ಮಾನವ ಎಂಬ ಪ್ರಾಣಿಯನ್ನು ಸೃಷ್ಟಿಸಿದ್ದು ಸಸ್ಯ ಆಹಾರ ತಿನ್ನಲು ಎಂಬುದು ನನ್ನ ಅನಿಸಿಕೆ .ಮಾಂಸ ಆಹಾರ ತಿನ್ನುವ ಪ್ರಾಣಿಗಳಿಗೆ ಚೂಪಾದ ಕೋರೆ ಹಲ್ಲುಗಳಿವೆ ಉದಾಹರಣೆ ಹುಲಿ .ನೀವು ಸಸ್ಯ ಆಹಾರಿ ಪ್ರಾಣಿಗಳ ಹಲ್ಲುಗಳ ರಚನೆಯನ್ನು ನೋಡಿ ಚೂಪಾದ ಕೋರೆಹಲ್ಲುಗಳು ಇಲ್ಲ ಉದಾಹರಣೆ ಮಾನವ ಜಾನುವಾರು ಮಂಗ ಇತ್ಯಾದಿ .ವಿಜ್ಞಾನಿಗಳು ಹೇಳುತ್ತಾರೆ ಮಂಗನಿಂದ ಮಾನವ ಎಂದು .ಮಂಗಗಳು ಮುಖ್ಯವಾಗಿ ಸಸ್ಯಹಾರಿಗಳು .ಕೆಲವೊಂದು ಜಾತಿಯ ಮಂಗಗಳು ಮಾತ್ರ ಸತ್ಯ ಆಹಾರದ ಒಟ್ಟಿಗೆ ಸಣ್ಣ ಇರುವೆಗಳನ್ನು ತಿನ್ನುತ್ತವೆ .ಅವುಗಳ ಆಹಾರ ಕೂಡ ಸಸ್ಯ ಆಹಾರವೇ ಮುಖ್ಯ .ಹೀಗೆ ಮಾಂಸ ಆಹಾರ ತಿನ್ನುವ ಮಾನವರ ಸಂಖ್ಯೆ ಜಾಸ್ತಿ ಆಗುತ್ತಾ ಹೋಗಿ ಮುಂಬರುವ 100 ವರ್ಷಗಳಲ್ಲಿ ಅದೂ ಬೇಡ ಅಷ್ಟು ವರ್ಷಗಳು ನಮ್ಮ ದೇಶದಲ್ಲಿ ಮಾಂಸ ಆಹಾರ ಪ್ರಧಾನ ಆಗಬಹುದು .ನಮ್ಮ ದೇಶದಲ್ಲಿ ಮಾಂಸ ಆಹಾರಕ್ಕಾಗಿ ಪ್ರಾಣಿ ಪಕ್ಷಿಗಳನ್ನು ಬೆಳೆಯುವವರ ಸಂಖ್ಯೆ ಜಾಸ್ತಿಯಾಗಿ ಸಸ್ಯ ಆಹಾರ ಉತ್ಪನ್ನಗಳನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿ .
















