Saturday, 14 August 2021
ವಿದ್ಯಾರ್ಥಿಗಳಿಗೆ ಬಾಕಾಹು ರುಚಿ ತೋರಿಸಿದ ಅರಣ್ಯ ಮಹಾವಿದ್ಯಾಲಯ*
Wednesday, 28 July 2021
ನೀರಿಗೆ ಬಜೆಟ್ ...!
ಬರಹ: ಕೂಡಂಡ ರವಿ, ಹೊದ್ದೂರು, ಕೊಡಗು.
ಸಾಕಷ್ಟು ಮಂದಿ ನೀರಿನ ಸದ್ಭಳಕೆ-ಕಲುಶಿತತೆಯ ಬಗ್ಗೆ ವೇದಿಕೆ ಸಿಕ್ಕೊಡನೆ ಉದ್ದುದ್ದ ಭಾಷಣ ಬಿಗಿಯುವರು. ಸಾಕಷ್ಟು ಮಂದಿ ಪುಕ್ಕಟೆ ಉಪದೇಶ ನೀಡುವುದರಲ್ಲಿ ನಿಸ್ಸೀಮರು. ನೀರಿನ ವಿಚಾರ ಬಂದಾಗಲೂ ಇದು ಕಟು ವಾಸ್ತವ. ಇಂತಹ ಭಾಷಣಕಾರರು ತಾವು ನೀರಿನ ಉಳಿವಿನ ಬಗ್ಗೆ, ಕಲುಶಿತತೆ ನಿವಾರಣೆಯ ಬಗ್ಗೆ ತಾವೇನೂ ಮಾಡಿದ್ದೇವೆ ಎಂದು ಜನತೆಗೆ ತೋರಿಸಬೇಕು. ಬಳಿಕ ಅದನ್ನು ಎಲ್ಲರೂ ಅನುಸರಿಸುವಂತೆ, ಅನುಕರಿಸುವಂತೆ ಕರೆ ನೀಡಬೇಕು. ಆದರೆ, ಬಹುಪಾಲು ಆಗುತ್ತಿರುವುದೇ ಬೇರೆ. “ಹೇಳುವುದು ಒಂದು ಮಾಡುವುದು ಇನ್ನೊಂದು ನಂಬುವುದು ಹೇಗೋ ಕಾಣೆ”...ಎಂಬAತೆ !
ಭವಿಷ್ಯ ಕಠಿಣ
ಎಲ್ಲದಕ್ಕೂ ಸರಕಾರಗಳನ್ನೇ ನಂಬಿ ಕುಳಿತುಕೊಳ್ಳುವ ಬದಲು ಕೈಲಾದ ಮಟ್ಟಿಗೆ ಎಲ್ಲರೂ, ನೀರಿನ ವಿಚಾರದಲ್ಲಿ ಕಂಕಣ ಬದ್ಧರಾದಲ್ಲಿ ಸಮಸ್ಯೆ ಭವಿಷ್ಯದಲ್ಲಿ ಕಠಿಣವೆನಿಸಲಿಕ್ಕಿಲ್ಲ. ನಮಗೆ ನೀರು ಅತಿಯಾದಾಗ, ನೀರಿಗೆ ಬರ ಬಂದಾಗ ಮಾತ್ರ ನೀರು ನೆನಪಿಗೆ ಬರುವುದು ಸ್ವಾಭಾವಿಕ. ಆದರೆ, ನೀರು ಸಕಲ ಜೀವಚರಾಚರಗಳಿಗೆ ಮೂಲ. ಅದಕ್ಕಾಗಿ ಅದನ್ನು “ಜೀವಜಲ” ಎನ್ನುವರು. ಜಲವಿಲ್ಲದೆ ಜೀವವಿಲ್ಲ ! ಅದನ್ನು ಪುರಾಣ ಕಾಲದ ಋಷಿ ಮುನಿಗಳು ಚೆನ್ನಾಗಿ ತಿಳಿದಿದ್ದರು.
ಇದೇ ಹಿನ್ನೆಲೆಯಲ್ಲಿ ನಾವು “ಗಂಗೇಚ ಯಮುನೇಚಾ...ಶ್ಲೋಕ ಪಠಿಸುತ್ತೇವೆ. ಅವುಗಳನ್ನು ಭಕ್ತಿಭಾವದಿಂದ ಪೂಜಿಸುತ್ತೇವೆ. ಆರಾಧಿಸುತ್ತೇವೆ. ಆರ್ಘವನ್ನು ಅರ್ಪಿಸುತ್ತೇವೆ. ಪಿಂಡ ಪ್ರಧಾನ ಮಾಡುತ್ತೇವೆ. ಎಲ್ಲದಕ್ಕೂ ನೀರೇ ಮೂಲ. ಅಲ್ಲವೇ ? ಆದರೂ, ನಾವು ನೀರಿನ ಬಗ್ಗೆ ಇಲ್ಲ ಸಲ್ಲದ ತಾತ್ಸಾರ ಮನೋಭಾವನೆ ತೆಳೆದಿರುವೆವು ! ಕೃಷಿಯಂತೂ ನೀರಿಲ್ಲದ ಇಲ್ಲವೇ ಇಲ್ಲ. ಬರೇ ನೀರನ್ನೇ ಬಳಸಿ ಮಾಡುವ ಕೃಷಿಯೂ ಇದೆ ! (ಮಣ್ಣು ರಹಿತ !) ಆದರೂ, ನೀರನ್ನು ವ್ಯರ್ಥ ಪೋಲು ಮಾಡುತ್ತೇವೆ. ಇದರ ಅರಿವು ಬಹುತೇಕರಿಗೆ ಇಲ್ಲ. ಇದ್ದರೂ ಅದು ಕೇವಲ ಭಾಷಣಗಳಿಗಷ್ಟೇ ಸೀಮಿತ !?
ನೀರಿನ ಬರ ಎಷ್ಟು ಭೀಕರ !
ನಮ್ಮ ದೇಶದಲ್ಲಿ ೪೦ ಲಕ್ಷ ಮಂದಿ ನೀರಿನ ಕೊರತೆ, ನೈರ್ಮಲ್ಯರಹಿತ ನೀರಿನ ಬಳಕೆಯಿಂದ ಸಾಯುತ್ತಿದ್ದಾರೆ. ನಮ್ಮ ದೇಶದ ೧೦೦ ಮಿಲಿಯನ್ ಮಕ್ಕಳಿಗೆ ಮನೆಯಲ್ಲಿ ಕುಡಿಯಲು ಶುದ್ಧ ನೀರಿಲ್ಲ !? ವಿಶ್ವದ ಸರಿಸುಮಾರು ೨.೨ ಶತಕೋಟಿ ಜನತೆಗೆ ಕುಡಿಯುವ ನೀರಿನ ಕೊರತೆ ಇದೆ. ೩ ಬಿಲಿಯನ್ ಜನತೆಗೆ ಕೈ ತೊಳೆಯಲು ನೀರಿಲ್ಲ.
ನಮ್ಮ ರಾಜ್ಯದ ಸಮಸ್ಯೆಯೇನು ?
ಮೈಸೂರು ಜಿಲ್ಲೆಯ ೧೩ ಹಳ್ಳಿಗಳಲ್ಲಿ ಇನ್ನೂ ಕುಡಿಯುವ ನೀರಿನ ಸೌಲಭ್ಯವಿಲ್ಲ. ಕೊಡಗಿನ ಬಹುಪಾಲು ಹಳ್ಳಿ ಪಟ್ಟಣಗಳು ಕಾವೇರಿ ನದಿಯ ದಂಡೆಯಲ್ಲಿವೆ. ಅದರೂ, ಅವುಗಳಲ್ಲಿ ಹೆಚ್ಚಿನ ಪಟ್ಟಣಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ ! ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳು ಕೃಷಿಗೆ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವರು. ಉದಾಹರಣೆಗಾಗಿ ಹಾರಂಗಿ ಜಲಾಶಯದ ಕೆಳಭಾಗದ ಜನತೆಯ ಕೃಷಿಗೆ ನೀರೇ ಇಲ್ಲ. ಹೇಮಾವತಿ ಜಲಾಶಯದ ಕೆಳ ಭಾಗ ಅಂದರೆ, ತುಮಕೂರು ಜಿಲ್ಲೆಯ ಬಹುಪಾಲು ಕೆರೆಗಳನ್ನು ತುಂಬಿಸಲು ಹೇಮಾವತಿ ಜಲಾಶಯದಿಂದ ನೀರನ್ನು ಹರಿಸುತ್ತಿಲ್ಲ, ನಮ್ಮ ಸರಕಾರಗಳು ! ಉತ್ತರ ಕರ್ನಾಟಕ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಯಾವ ಸರಕಾರಗಳು ಪ್ರಯತ್ನಿಸುತ್ತಿಲ್ಲ. ಜನತೆಯ ಪ್ರತಿಭಟನೆ ಮುಗಿಲು ಮುಟ್ಟಿದರೂ, ಜನಪ್ರತಿನಿಧಿಗಳ ಕಿವುಡರಾಗಿದ್ದಾರೆ !
ಇದರಿಂದ ಆ ಭಾಗದ ರೈತರಿಗೆ ಕೃಷಿಗೆ ಹೋಗಲಿ, ಕುಡಿಯಲು ನೀರಿಲ್ಲ. ಬೆಂಗಳೂರಿಗರಿಗೂ ಕುಡಿಯುವ ನೀರಿಲ್ಲ ! ಉತ್ತರ ಕರ್ನಾಟಕದ ಹಳ್ಳಿ-ಪಟ್ಟಣಗಳಲ್ಲಿ ನಾಲ್ಕಾರು ದಿನಗಳಿಗೊಮ್ಮೆ ನಲ್ಲಿಗಳಲ್ಲಿ ನೀರು ಬರುತ್ತದೆ ! ಅದನ್ನು ತುಂಬಿ ಇಡುವ ಸ್ಥಳ ಮತ್ತು ಪಾತ್ರೆ-ಪಗಡೆ ಇಡಲು ಪ್ರತೀ ವರ್ಷವೂ ಸಹಸ್ರಾರು ರೂಪಾಯಿ ಖರ್ಚು ಮಾಡುತ್ತಾರೆ. ಗದಗದ ಮಂದಿ !? ಮಹರಾಷ್ಟçದ ಬುದ್ರಕ್ ಎಂಬ ಊರಿನಲ್ಲಿ ಅತೀ ಕಡಿಮೆ ಮಳೆ ಬರುತ್ತದೆ.( ಈ ಊರು ಗೋಲಗುಂಬಜ್‌ನಿAದ ೧೫ ಕಿಲೋ ಮೀಟರ್ ದೂರದಲ್ಲಿದೆ) ಅಲ್ಲಿ ಇಡೀ ವರ್ಷಕ್ಕೆ ಮಲೆನಾಡಿನಲ್ಲಿ ಒಂದು ದಿನ ಬರುವ ಮಳೆಗಿಂತ ಕಡಿಮೆ ಮಳೆ ಬರುತ್ತದೆ. ಸುಮಾರು ೮- ೯ ಇಂಚು. ಆದರೆ, ಮಲೆನಾಡಿನಲ್ಲಿ ದಿನಕ್ಕೆ ೧೦-೧೫ ಇಂಚು ಮಳೆ ಬರುತ್ತದೆ. (ಒಂದು ಇಂಚು ಅಂದರೆ, ನಾಲ್ಕು ಸೆಂಟಿಮೀಟರ್, ಅಥವಾ -೨೫.೪ ಮಿಲಿಮೀಟರ್). ಇಂತಹ ಊರಿನಲ್ಲಿಯೂ ನೀರು ಬಳಸಿ ಕೃಷಿ ಮಾಡುತ್ತಾರೆ. ನಮ್ಮ ಊರಿನಲ್ಲಿ (ಮಲೆನಾಡಿನಲ್ಲಿ) ಕೃಷಿಗೆ ನೀರು ಸಿಗುತ್ತಿಲ್ಲ ಎಂದು ಜನತೆ ಭತ್ತದ ಗದ್ದೆಗಳನ್ನು ಹಾಳುಬಿಟ್ಟಿದ್ದಾರೆ !).
ನೀರಿನ ಕೊರತೆಯ ಜೊತೆಗೆ, ಬೆಂಗಳೂರು ನೀರಿನ ತೊಂದರೆಗಳು ಮತ್ತೊಂದು ಆಯಾಮವನ್ನು ಹೊಂದಿವೆ. ರಾಸಾಯನಿಕ ಮಾಲಿನ್ಯ. ಅಧ್ಯಯನದ ಆವಿಷ್ಕಾರಗಳು ಭೀಕರವಾದವು. ೭೩೫ ಮಾದರಿಗಳಲ್ಲಿ ೩೭೦ಕ್ಕೂ ಅಧಿಕ ಅಂತರ್ಜಲ ಕುಡಿಯಲು ಸೂಕ್ತವಲ್ಲ. ಅಂದರೆ ನಗರದ ೫೦% ಕ್ಕಿಂತ ಹೆಚ್ಚು ಕುಡಿಯುವ ನೀರು ಕುಡಿಯಲು ಸಾಧ್ಯವಿಲ್ಲ. ಅವುಗಳು ವಿಷಕಾರಿ ವಸ್ತುಗಳಿಂದ ಕೂಡಿದೆ. ಇಂತಹವುಗಳನ್ನು ಕುಡಿದ್ದಲ್ಲಿ ಖಾಯಿಲೆ ಖಚಿತ.
ವಿಶ್ವ ಮಹಾ ಯುದ್ಧ
ಬೆಂಗಳೂರಿನ ಭಾಗದ ಜನತೆಗೆ ಕುಡಿಯುವ ನೀರಿನ ಪರಿಹಾರಕ್ಕಾಗಿ ನೇತ್ರಾವತಿ ನದಿಯ ಕೆಲ ಭಾಗದ ನೀರನ್ನು ಅತ್ತ ತಿರುಗಿಸಿ ಬಳಸುವ ಯೋಜನೆ ಇದೆ. ಸಮುದ್ರ ಸೇರುವ ನೀರನ್ನು ಕುಡಿಯಲು ಬಳಸುವುದರಲ್ಲಿ ತಪ್ಪೇನು ? ಎಂಬುದು ಕೆಲವರ ವಾದ. ಇದರಿಂದ ನೇತ್ರಾವತಿ ಬತ್ತಿಹೋಗುತ್ತದೆ ಎನ್ನುವರು ಕೆಲವರು. ಕರ್ನಾಟಕ-ತಮಿಳುನಾಡು ವಿಚಾರ ಹೆಚ್ಚಾಗಿ ರಾಷ್ಟೀಯ ಮಟ್ಟದಲ್ಲಿ ಚರ್ಚೆಯಾಗುವುದೇ ಕಾವೇರಿ ನೀರಿನಿಂದ. ನೀರಿನ ವಿಚಾರಗಳೇ ಹಲವಾರು ಸಮಸ್ಯೆಗಳ ಮೂಲ. ಇದು ತೃತೀಯ ವಿಶ್ವ ಮಹಾಯುದ್ಧಕ್ಕೆ ಕಾರಣವಾಗಬುದು ಎಂದು ಎಚ್ಚರಿಸಿದ್ದಾರೆ ಹಿರಿಯರು. ಅದರೂ, ನಾವು ಎಚ್ಚರಗೊಂಡAತಿಲ್ಲ !
ಜೀವಜಲ-ಇನ್ನೆಷ್ಟು ದಿನ ?
ನೀರಿನ ಸಮಸ್ಯೆ ಇದೇ ರೀತಿ ಮುಂದುವರಿದ್ದಲ್ಲಿ ಕುಡಿಯುವ ನೀರಿಗಾಗಿ ಹಳ್ಳಿ-ಪಟ್ಟಣಗಳಲ್ಲಿ ನಡೆಯುತ್ತಿರುವ ಗಲಭೆಗಳು ವಿಶ್ವಮಟ್ಟ ತಲುಪಲು ಹೆಚ್ಚು ದಿನ ಬೇಕಿಲ್ಲ. ಶುದ್ಧ ಕುಡಿಯುವ ನೀರು ಮುಂಬರುವ ದಿನಗಳಲ್ಲಿ ಮರೀಚಿಕೆಯಾಗಲಿದೆ. ಹಲವಾರು ಊರುಗಳಲ್ಲಿ ಸೇನೆಯ ಸೇವೆ ಸಲ್ಲಿಸಿ ಬಂದ ಮಿತ್ರನೊಬ್ಬನ ಪ್ರಕಾರ ಕೊಡಗಿನ ಪ್ರತೀ ಊರಿನಲ್ಲಿ ಮಾತ್ರ ಕುಡಿಯಲು ಶುದ್ಧ ನೀರು ಸಿಗುತ್ತದೆ. ಇತರ ಕಡೆ ನೀರು ಕುಡಿಯಲು ಭಯವಾಗುತ್ತದೆ. ಬಾಟಲಿಯಲ್ಲಿ ಮಾರುವ ನೀರು ಕೂಡ ವಿಷಮಯವಾಗಿರುತ್ತದೆ. ಯಾವ ನೀರು ಕುಡಿಯಲಿ ಎಂದು ಜನತೆ ಗೊಂದಲದಲ್ಲಿದ್ದಾರೆ. ಇಂದು ಈ ಸಮಸ್ಯೆ ಬಹುತೇಕ ಕಡೆ ಇದೆ. ಆದರೆ, ನಮ್ಮ ಜನತೆ ಎಚ್ಚರವಾಗುತ್ತಿಲ್ಲ. ಸಮಸ್ಯೆ ಅವರ ಬುಡಕ್ಕೆ ಬಂದಾಗ ಮಾತ್ರ ಎಚ್ಚರವಾಗುವವರು ಕೆಲವರು ! ಗುಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದಂತೆ !
ಮಕ್ಕಳಿಗೂ ನೀರಿನ ಅರಿವು
ನೀರಿನ ಬಗ್ಗೆ ಅರಿವಿಲ್ಲದೇ ಹಲವಾರು ನದಿಗಳು ಬೇಸಿಗೆ ಬತ್ತಿ ಹೋಗುತ್ತಿವೆ. ಅದನ್ನು ನಂಬಿಕೊAಡಿರುವ ಜಲಚರಗಳು ನಿರ್ವಂಶವಾಗುತ್ತಿವೆ. ಈ ಬಗ್ಗೆ ನಾವು ತಿಳಿದುಕೊಂಡು ಅದನ್ನು ಅನುಸರಿಸಬೇಕು. ಅದನ್ನು ನಮ್ಮ ಮಕ್ಕಳಿಗೂ ತಿಳಿ ಹೇಳಬೇಕು. ಪ್ರತೀ ನೀರಿನ ಹನಿಯ ಮೌಲ್ಯವನ್ನು ಅವರಿಗೆ ತಿಳಿಸಬೇಕು. ಅದನ್ನು ಪಾಲಿಸುವಂತೆ ಅವರಿಗೆ ಮನವರಿಕೆ ಮಾಡಬೇಕಿದೆ. ಶಾಲಾ ಕಾಲೇಜುಗಳ ಪಠ್ಯದಲ್ಲಿ ಈ ಭಾಗವನ್ನು ಸೇರಿಸುವ ಅಗತ್ಯತೆ ಇದೆ. ಸಂಘ-ಸAಸ್ಥೆಗಳ ಸಹಕಾರದೊಂದಿಗೆ ಪ್ರತೀ ಶಾಲಾ-ಕಾಲೇಜುಗಳಲ್ಲಿ ಮಳೆನೀರು ಕೊಯ್ಲುವಿನ ಪ್ರಾಯೋಗಿಕ ಪಾಠ ಜಾರಿ ಮಾಡಬೇಕಿದೆ. ನಮ್ಮ ಮನೆ-ಮನಗಳಲ್ಲಿ ಪ್ರತೀ ದಿನವೂ “ಜಲೋತ್ಸವ” ನಡೆಯಬೇಕು.ಸರಕಾರದ ವತಿಯಿಂದ ನಿರ್ಮಾಣವಾಗುವ ಎಲ್ಲಾ ಕಟ್ಟಡ-ಮನೆಗಳಲ್ಲಿ ಕಡ್ಡಾಯವಾಗಿ ಮಳೆಕೊಯ್ಲು ಅಳವಡಿಸಬೇಕಿದೆ.
ನಾನು ಈ ಕುರಿತು ಪಠ್ಯಕ್ಕೆ ಯೋಗ್ಯವಾಗಬಹುದಾದ ಲೇಖನವನ್ನು ಬರೆದಿರುವೆ. ಬೆಂಗಳೂರಿನ ಮಿತ್ರರೊಬ್ಬರು ಅದನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದರು ! (ಈ ಲೇಖನ ನನ್ನ ಬ್ಲಾಗ್‌ನಲ್ಲಿದೆ. ನನ್ನ ಬ್ಲಾಗ್‌ನಲ್ಲಿನ ನೀರಿನ ಕುರಿತಾದ ಲೇಖನವನ್ನು ೫೦ ಸಾವಿರಕ್ಕೂ ಅಧಿಕ ಮಂದಿ ಓದಿರುವರು. ಬರೇ ಓದಿದರೆ ಸಾಲದು. ಅದನ್ನು ಅನುಸರಿಸುವ ಪ್ರಯತ್ನ ಪಡಬೇಕು.)
ನೀರಿನ ಮುಂಗಡ ಪತ್ರದ ಅಗತ್ಯ
ನಾವು ಸಾಮಾನ್ಯ ಕೇಂದ್ರ ಮುಂಗಡಪತ್ರ, ರೈಲ್ವೆ ಮುಂಗಡ ಪತ್ರ, ರಾಜ್ಯ ಮುಂಗಡ ಪತ್ರ, ಕೃಷಿ ಮುಂಗಡ ಪತ್ರಗಳನ್ನು ಕೇಳಿರುವೆವು. ಆದರೆ, ಇಂದಿನ ಸಮಸ್ಯೆಗಳ ಸಮತೋಲನಕ್ಕಾಗಿ ನೀರಿನ ಮುಂಗಡ ಪತ್ರವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಂಡಿಸುವ ಅವಶ್ಯಕತೆ ಇದೆ. ಇದರಿಂದ ಪ್ರತಿ ಗ್ರಾಮ ಮಟ್ಟದಿಂದಲೇ ನೀರಿನ ಬಗ್ಗೆ ಅರಿವು ನೀರಿನ ಉಳಿವು ಮುಂತಾದವುಗಳು ಸಾಧ್ಯ. ಇವುಗಳು ಮೊಟ್ಟ ಮೊದಲಿಗೆ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾರಿಯಾಗಬೇಕಿದೆ. ಮನೆಯಲ್ಲಿಯೂ ನೀರಿನ ಮುಂಗಡ ಕಾಯ್ದಿರಿಸುವಿಕೆ ಮಾಡುವುದು ಉತ್ತಮ. ಹಲವಾರು ಕಡೆ ಮಳೆಗಾಲದಲ್ಲಿ ದೊರೆಯುವ ವಿಫುಲ ನೀರನ್ನು ಸಂಗ್ರಹಿಸಿ, ಬೇಸಿಗೆ ದಿನಗಳಲ್ಲಿ ಬಳಸುವ ಪರಿಪಾಠವಿದೆ. ಈ ಯೋಜನೆಯು ಪ್ರತೀ ಗ್ರಾಮದ ಪ್ರತೀ ಮನೆಗೂ ತಲುಪಬೇಕಿದೆ. ಈ ನಿಟ್ಟಿನಲ್ಲಿ ವಿವಿಧ ನೀರಿನ ಕ್ಲಬ್‌ಗಳ ಸಹಕಾರ ಅತ್ಯಗತ್ಯ.
ನೀರಿಲ್ಲದ ನಾಳೆ !
ನೀರಿಲ್ಲದ ನಾಳೆಯನ್ನು ನೀವು ಕಲ್ಪಿಸಿಕೊಳ್ಳಲೂ ಅಸಾಧ್ಯ. ನೀರು ಇದ್ದೆ ನಮ್ಮ ನೀರಿಗೆ ನಾವೇ ಪ್ರತೀ ಲೀಟರ್‌ಗೆ ೨೦ ರೂಪಾಯಿ ನೀಡಿ ಕುಡಿಯುತ್ತೇವೆ. ಹಲವಾರು ಬಹುರಾಷ್ಟೀಯ ಕಂಪೆನಿಗಳು ನಮ್ಮ ನೀರನ್ನು ನಮಗೆ ಮಾರಿ ಬಿಲಿಯನ್ ಹಣ ಸಂಪಾದಿಸುತ್ತಿವೆ. ನಾವೆಷ್ಟು ದಡ್ಡರು ! ಶೀಷೆಯಲ್ಲಿ ತುಂಬಿಸಿದ ವಿಷಭರಿತ ನೀರನ್ನು ತೀರ್ಥದಂತೆ ಕುಡಿಯುತ್ತೇವೆ. ಮುಂಬರುವ ವರ್ಷಗಳಲ್ಲಿ ಕುಡಿಯುವ ನೀರಿಗೆ ಪ್ರತೀ ಲೀಟರ್‌ಗೆ ೧೦೦ ರೂಪಾಯಿ ಆದರೂ ನೀವು ಅಚ್ಚರಿ ಪಡಬೇಕಿಲ್ಲ. ಹಲವಾರು ಕಡೆ ಶುದ್ಧ ನೀರು ದಂಧೆಯೇ ನಡೆಯುತ್ತಿದೆ. ಪ್ರತೀ ಲೀಟರ್ ನೀರು ಪೆಟ್ರೋಲಿಯಂಗಿAತಲೂ ದುಬಾರಿಯಾಗಲಿದೆ. ಇಂತಹ ದುರ್ದಿನಗಳು ತೀರಾ ಸಮೀಪದಲ್ಲಿವೆ.
ಹನಿ ನೀರು ದುಬಾರಿ !
ಆದುದರಿಂದ ಇಂದೇ ಪ್ರತೀ ಹನಿ ನೀರನ್ನು ಅರಿತು ಬಳಸೋಣ. ಅದನ್ನು ಸದ್ವಿನಿಯೋಗ ಮಾಡೋಣ. ಈ ವಿಚಾರವನ್ನು ನಾವೇಲ್ಲರೂ ಅನುಸರಿಸೋಣ. ಈ ಸಂದೇಶವನ್ನು ಇತರರಿಗೂ ಹಂಚೋಣ. ನೆಮ್ಮದಿ ನಾಳೆ ನಮ್ಮದಾಗಲಿ ಎಂದು ಆಶಿಸೋಣ.
Wednesday, 21 July 2021
ಸಾವಯವ-ಸಾಯುತ್ತಿರುವ ರೈತ: ಬಳಕೆದಾರ... !?
ಈಗ ಎಲ್ಲೆಲ್ಲೂ ಸಾವಯುವ ಕೃಷಿಯ ಮಾತು. ಇಂತಹ ಕೃಷಿಯ ಉತ್ಪನ್ನಗಳಿಗೆ ಬೇಡಿಕೆ ಅಧಿಕ. ಹಲವರು ಸಾವಯುವ ಹೆಸರನ್ನು ದುರ್ಬಳಕೆ ಮಾಡಿ ರೈತಾಪಿ ವರ್ಗವನ್ನು, ಬಳಕೆದಾರರನ್ನು ವಂಚಿಸುತ್ತಿರುವುದು ಹೆಚ್ಚಾಗುತ್ತಿದೆ.
ಉದಾಹರಣೆಗಾಗಿ ಸಾವಯವ ಕೃಷಿಗೆ ದೃಡೀಕರಣ ಪತ್ರ ನೀಡುವಾಗ ರೈತರ ಜಮೀನ ಮಣ್ಣು ಇಂತಹ ಗುಣಗಳನ್ನು ಹೊಂದಿರಬೇಕು. ಅಂತಹ ಜಮಿನಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಇಂತಿಷ್ಟೇ ಇರಬೇಕು. ಬೆಳೆದ ಬೆಳೆಯಲ್ಲಿ ರಾಸಾಯನಿಕದ ಅಂಶಗಳು ಇರಬಾರದು. ರಾಸಾಯನಿಕ ಗೊಬ್ಬರದ ಸೂಚ್ಯಂಕದ ಮಟ್ಟವು ಇಂತಿಷ್ಟೇ ಇರಬೇಕೆಂಬ ಮಾನದಂಡವೇ ಇಲ್ಲ ! ಆದರೂ, ಹಲವಾರು ಕಡೆ ಸಾವಯವ ಸರ್ಟಿಫಿಕೇಟ್ಗಳು ಬಿಕರಿಯಾಗುತ್ತಿವೆ ! ಇಲ್ಲಿ ವಿಪರ್ಯಾಸದ ಅಂಶವೆAದರೆ, ಸಾವಯವ ದೃಡೀಕರಣ ಪತ್ರ ಪಡೆದ ಆ ಬೆಳೆಗಾರ ಬಳಿಕ ರಾಸಾಯನಿಕ ವಸ್ತುಗಳ ಮೊರೆ ಹೋಗಬಾರದು ಎಂದೇನೂ ಇಲ್ಲವಲ್ಲ. ಅಂತಹ ದೃಡೀಕರಣ ಪತ್ರ ಹೊಂದಿರುವಾತ, ಒಂದು ಏಕರೆಗೆ ಪ್ರಮಾಣ ಪತ್ರ ಮಾಡಿಸಿ, ಬಳಿಕ ರಾಸಾಯನಿಕಕ್ಕೆ ಮೊರೆ ಹೋಗುವ ಸಂಭವ ಹೆಚ್ಚು. ಅಥವಾ ಅರ್ಧ ಏಕರೆಗೆ ಸಾವಯವ ದೃಡೀಕರಣ ಪತ್ರ ಪಡೆದು, ಉಳಿದ ಜಮೀನಿನಲ್ಲಿ ರಾಸಾಯನಿಕ ಬಳಸಿ, ಬೆಳೆ ಬೆಳೆದು ಮಿಶ್ರಣ ಮಾಡಿ ಮಾರಾಟ ಮಾಡಿ ಖರೀದಿದಾರನಿಗೆ ಮೋಸ ಮಾಡಬಹುದು. ಇಲ್ಲವಾದಲ್ಲಿ ರಾಸಾಯನಿಕ ಬಳಸಿ ಬೆಳೆದ ಬೆಳೆಗಳನ್ನು ಬೇರೆಯವರಿಂದ ಖರೀದಿಸಿ ಸಾವಯವ ಎಂಬ ಹೆಸರಿನಲ್ಲಿ ಮಾರಾಟ ಮಾಡಲೂ ಬಹುದು.
ಇದೇ ರೀತಿ ಗೊಬ್ಬರ ಮತ್ತು ಕೀಟ-ಕಳೆನಾಶಕದ ಪಾಡು. ಹಾಗಾದಲ್ಲಿ ಬಳಕೆದಾರರ ಪಾಡೇನು ? ಇದು ಸಾವಯವ ಎನ್ನಲು ನಾಮದ ಬಲವೊಂದೇ ಸಾಕೆ ? ಬೇರೇನೂ ಬೇಡವೇ ?
ಕುಲಾಂತರಿ ಬೀಜಗಳ ಬಳಕೆ !
ಸಾವಯವ ಬೆಳೆಗೆ ಕುಲಾಂತರಿ ಬೀಜಗಳ ಬಳಕೆ ಮಾಡಬಾರದು ಎಂಬ ನಿಯಮವಿದೆ. ಅದರೆ, ಎಷ್ಟು ಮಂದಿ ಈ ನಿಯಮ ಪಾಲಿಸುತ್ತಾರೆ ! ಇದನ್ನು ಖತರಿ ಪಡಿಸಿಕೊಳ್ಳುವ ಮಾರ್ಗವಾದರೂ ಯಾವುದು ? ಇಲ್ಲಿ ಮಣ್ಣು ಮತ್ತು ಬೆಳೆಯ ಪರೀಕ್ಷಗೆ ಸೂಕ್ತ ಮಾನದಂಡಗಳಿಲ್ಲ ! ಹಾಗಾದಲ್ಲಿ ಸಾವಯವ ದೃಡೀಕರಣ ಪತ್ರ ಕೇವಲ ನಾಟಕವೇ ?
ಗ್ರಾಹಕರು ರೈತರ ಜಮೀನಿಗೆ ಭೇಟಿ ನೀಡಿ ಅವರು ಬೆಳೆಯುತ್ತಿರುವ ವಿಧಾನವನ್ನು ಪರಿಶೀಲಿಸಲು ಸಾಧ್ಯವೇ ? ಹಲವು ನಗರ ಪಟ್ಟಣಗಳಲ್ಲಿ ಸಾವಯವ ತರಕಾರಿಗಳನ್ನು ಮಾರುವ ಮಳಿಗೆಗಳಿವೆ. ಇಲ್ಲಿ ಬಳಕೆದಾರನಿಗೆ ಮೋಸವಾಗುವುದಿಲ್ಲವೇ ? ಅದನ್ನು ತಡೆಯುವರಾರು ? ಇಂತಹ ಮೋಸದ ವ್ಯವಹಾರಗಳಿಂದ ನೈಜ ಸಾವಯವ ಕೃಷಿಕ ಬಾಂಧವರಿಗೆ ಮೋಸವಾಗುತ್ತಿದೆ. ಸಾವಯವ ತರಕಾರಿ ಬೇಕು ಎಂಬ ಬಳಕೆದಾರನಿಗೆ ಎಲ್ಲಾ ಕೃಷಿಕರ ಮೇಲೂ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಇದನ್ನು ಸರಿ ಪಡಿಸುವವರಾರು? ಹೇಗೆ ಸರಿ ಪಡಿಸುವುದು ಎಂಬ ವಿಚಾರಗಳು ಚರ್ಚೆಯಾಗಬೇಕಿದೆ. ಅದು ಕಟ್ಟುನಿಟ್ಟಾಗಿ ಅನುಷ್ಠಾನವಾಗಬೇಕಿದೆ. ಈ ಬಗ್ಗೆ ಕೊಳ್ಳುಗರು ರೈತಾಪಿ ವರ್ಗದವರು ಎಚ್ಚರ ವಹಿಸಬೇಕಾಗಿದೆ.
ಸದ್ಯಕ್ಕೆ ಸಾವಯವ ತರಕಾರಿಯು ಬೆಳೆಗಾರನ ನೈತಿಕತೆಯನ್ನು ಅವಂಬಿಸಿಯೇ ಹೊರತು ಯಾರ ಸರ್ಟಿಫಿಕೇಟಿನ ಹಂಗಿನಲ್ಲಿ ಇಲ್ಲ.
ಗೊಬ್ಬರದಲ್ಲಿ ಗೋಲ್ಮಾಲ್ !
ಹಲವರು ಸಾವಯವ ಗೊಬ್ಬರ ಎಂದು ಯಾವುದೋ ಮಿಶ್ರಣವನ್ನು ಮನೆ- ಮನೆಗಳಿಗೆ ವಿತರಿಸುತ್ತಾರೆ. ಅದು ಯಾವ ಗೊಬ್ಬರ ಎಂದು ಮಾರುವವರಿಗೆ ತಿಳಿದಸಿರುವುದಿಲ್ಲ. ಕೊಳ್ಳುವವರಿಗೂ ಇದರ ಸುಸ್ಪಷ್ಟ ಮಾಹಿತಿಯೂ ಇರುವುದಿಲ್ಲ. ಕೆಲವರು ಮನೆಯಲ್ಲಿ ಹಸು-ಕರು ಸಾಕಲಾಗದೆ ಸಾವಯವ ಎಂಬ ಹೆಸರನ್ನು ನೋಡಿ ಇಂತಹ ಗೊಬ್ಬರ ಖರೀದಿಸುತ್ತಾರೆ. ಇಂತಹ ಮಾರಾಟಗಾರರ ಬಳಿ ಎಂದೋ ನೀಡಿದ ದೃಡೀಕರಣ ಪತ್ರದ ನಕಲು ಪ್ರತಿ ಇರುತ್ತದೆ. ಕೆಲವೊಮ್ಮೆ ಇಂತಹ ಗೊಬ್ಬರದಲ್ಲಿ ಗಾಜಿನ ಪುಡಿ, ಬಯಲು ಸೀಮೆಯ ಕಪ್ಪು ಮಣ್ಣು, ಇದ್ದಲು ಇತ್ಯಾದಿಗಳಿರುತ್ತದೆ. ಹಲವು ಕಡೆ ಸಿಮೆಂಟ್ ಪುಡಿಯನ್ನು ಮಾರಾಟ ಮಾಡುವ ಏಜೆನ್ಸಿಗಳಿದ್ದಾರೆ !
ಕೃಷಿಕ ಮಿತ್ರರು ಈ ಬಗ್ಗೆ ಎಚ್ಚರವಾಗಿದಿದ್ದಲ್ಲಿ ನಿಮಗೆ ಟೋಪಿ ಖಚಿತ !
ಇದಕ್ಕೆ ಎಲ್ಲಾ ಪರಿಹಾರ ಗೋಆದಾರಿತ ವಿಷರಹಿತ ನೈಸರ್ಗಿಕ ಕೃಷಿ !!!
Sunday, 18 July 2021
ಕಾಳುಮೆಣಸಿಗೆ ಜೈವಿಕ ಗೊಬ್ಬರ
ಬರಹ: ಕೂಡಂಡ ರವಿ, ಹೊದ್ದೂರು.
ಅರ್ಕಾ ಸೂಕ್ಷಾ÷್ಮಣು ಜೀವಿಗಳ ಸಮೂಹ ಎಂಬ ಜೈವಿಕ ಗೊಬ್ಬರವನ್ನು ಕಾಳು ಮೆಣಸು ಬೆಳೆಯ ಇಳುವರಿ ಹೆಚ್ಚಿಸಲು ಸಹಕಾರಿ. ಜೊತೆಗೆ ಆದ್ದರಿಂದ ಜಿಲ್ಲೆಯ ರೈತರು ಈ ಸೂಕ್ಷಾ÷್ಮಣು ಜೀವಿಗಳ ಸಮೂಹವನ್ನು ಕಾಳುಮೆಣಸಿನಲ್ಲಿ ಬಳಸಿ. ಇಳುವರಿಯನ್ನು ಹೆಚ್ಚಿಸಬಹುದಾಗಿದೆ. ಶೀಘ್ರ ಸೊರಗು ಮತ್ತು ಹಳದಿ ರೋಗವನ್ನು ಹತೋಟಿ ಮಾಡಲು ಶಿ¥s಼Áರಸ್ಸು ಮಾಡಬಹುದೆಂದು ಕೃಷಿ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಅರ್ಕಾ ಸೂಕ್ಷಾ÷್ಮಣು ಜೀವಿಗಳ ಸಮೂಹವನ್ನು ಕಾಳುಮೆಣಸಿಗೆ ಬಳಸುವುದರಿಂದ ಬಳ್ಳಿಗಳು ಹೊಸದಾಗಿ ಚಿಗುರು ಬರಲು, ಶೀಘ್ರ ಸೊರಗು ರೋಗವನ್ನು ಹತೋಟಿ ಮಾಡಲು, ಗೊಂಚಲು ಅಕಾಲಿಕವಾಗಿ ಬೀಳುವ ಸಮಸ್ಯೆಯನ್ನು ಕಡಿಮೆ ಮಾಡಲು ಮತ್ತು ಉತ್ತಮವಾಗಿ ಬೇರು ಬರಲು ಸಹಾಯವಾಗುತ್ತದೆ.
ಕಡಿಮೆ ಖರ್ಚು
ಜೈವಿಕ ಗೊಬ್ಬರಗಳು ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಗುಣ ವಿಶೇಷತೆಯಿಂದ ಪ್ರಾಮುಖ್ಯತೆಯನ್ನು ಪಡೆದಿರುತ್ತವೆೆ. ಪ್ರಸ್ತುತ ಜೈವಿಕ ಗೊಬ್ಬರಗಳ ಬಳಕೆ ಬಗ್ಗೆ ಸರಿಯಾದ ಮಾಹಿತಿಯಿಲ್ಲದಿರುವುದರಿಂದ, ಜೈವಿಕ ಸಂಪನ್ಮೂಲಗಳ ಮತ್ತು ತಂತ್ರಜ್ಞಾನದ ಕೊರತೆಯಿಂದಾಗಿ ಜೈವಿಕ ಗೊಬ್ಬರಗಳ ಬಳಕೆ ಕಡಿಮೆಯಾಗಿದೆ. ಈ ಕೊರತೆಯನ್ನು ನೀಗಿಸಲು ಮತ್ತು ಒಂದೇ ರೀತಿಯ ಜೈವಿಕ ಗೊಬ್ಬರಗಳ ಬಳಕೆಯಿಂದ ಉಂಟಾಗುವ ಅಧಿಕ ಖರ್ಚು ಮತ್ತು ಕಡಿಮೆ ಕಾರ್ಯಕ್ಷಮತೆಯ ನ್ಯೂನತೆಯನ್ನು ಹೋಗಲಾಡಿಸಲು ಉದ್ದೇಶಿಸಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಜೈವಿಕ ಗೊಬ್ಬರವಾದ ಅರ್ಕಾ ಸೂಕ್ಷಾ÷್ಮಣು ಜೀವಿಗಳ ಸಮೂಹವನ್ನು ಉತ್ಕöÈಷ್ಟ ತಂತ್ರಜ್ಞಾನದೊAದಿಗೆ ಅಭಿವೃದ್ಧಿಪಡಿಸಿದೆ. ಅರ್ಕಾ ಸೂಕ್ಷಾ÷್ಮಣು ಜೀವಿಗಳ ಗೊಬ್ಬರವು ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಲಭ್ಯವಿದೆ. ಕೃಷಿ ವಿಜ್ಞಾನ ಕೇಂದ್ರದಲ್ಲಿ ದೊರೆಯುವ ಈ ಗೊಬ್ಬರವನ್ನು ಸಸ್ಯ ಸಂರಕ್ಷಣಾ ತಜ್ಞ ಡಾ.ವೀರೇಂದ್ರ ಕುಮಾರ್ ರೈತರಲ್ಲಿ ಮನವಿಯನ್ನು ಮಾಡಿದ್ದಾರೆ.
ಸೂಕ್ಷಾ÷್ಮಣು ಜೀವಿಗಳ ಉಪಯೋಗಗಳು
ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಹಾಗೂ ಸಸ್ಯ ಬೆಳವಣಿಗೆಯನ್ನು ಪ್ರಚೋದಿಸುವ (ಅಜಟೋಬ್ಯಾಕ್ಟರ್ ಟ್ರೋಪಿಕಾಲಸ್, ಬೆಸಿಲ್ಲಸ್ ಆರ್ಯಭಟ ಮತ್ತು ಸುಡೋಮೋನಾಸ್ ಥಾಯ್ವಾನೆನ್ಸಿಸ್) ಕಾರ್ಯಕ್ಷಮತೆಯನ್ನು ಹೊಂದಿರುತ್ತದೆ.
ಈ ಸೂಕ್ಷಾ÷್ಮಣು ಜೀವಿಗಳ ಸಮೂಹವನ್ನು ಬಳಸುವುದರಿಂದ ಕಾಳುಮೆಣಸಿನ ಗಿಡ ಹಳದಿಯಾಗುವುದನ್ನು ತಡೆಗಟ್ಟುತ್ತದೆ. ಬೇರಿನ ಬೆಳವಣಿಗೆ ಉತ್ತಮವಾಗಿದ್ದು, ಶೀಘ್ರಸೊರಗು ರೋಗವನ್ನು ಹತೋಟಿಯಲ್ಲಿಡುತ್ತದೆ.
ಅರ್ಕಾ ಸೂಕ್ಷಾ÷್ಮಣು ಜೀವಿಗಳ ಸಮೂಹದ ಬಳಕೆಯಿಂದ ಸಸ್ಯದ ಬೆಳವಣಿಗೆ, ರೋಗ ನಿಯಂತ್ರಣ ಮತ್ತು ಇಳುವರಿ ಅಧಿಕಗೊಳ್ಳುತ್ತದೆ.
ಜೈವಿಕ ಗೊಬ್ಬರವನ್ನು ಬೀಜೋಪಚಾರ, ಮಣ್ಣಿಗೆ, ಕೊಟ್ಟಿಗೆ ಗೊಬ್ಬರ ಮತ್ತು ಬೇವಿನ ಹಿಂಡಿಯ ಜೊತೆ ಮಿಶ್ರಣ ಮಾಡಿ. ರೈತರು ಸುಲಭವಾಗಿ ಬಳಸಬಹುದು.
ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಹಾಗೂ ಸಸ್ಯ ಬೆಳವಣಿಗೆಯನ್ನು ಪ್ರಚೋದಿಸುವ ಸೂಕ್ಷಾ÷್ಮಣು ಜೀವಿಗಳನ್ನು ಬೇರೆ ಬೇರೆಯಾಗಿ ಹಾಕುವ ಅವಶ್ಯಕತೆ ಇಲ್ಲ. ಇದನ್ನು ರೈತರು ವಿವಿಧ ಬೆಳೆಗಳಿಗೆ ಬಳಸಬಹುದು.
ಬೀಜವು ಬೇಗ ಮೊಳೆಕೆಯೊಡೆಯುವಂತೆ ಮಾಡಿ, ಸಸ್ಯದ ಬೆಳವಣಿಗೆ ಮತ್ತು ಧೃಡತೆಯನ್ನು ಹೆಚ್ಚಿಸುತ್ತದೆ.
ಶಿಫಾರಸ್ಸು ಮಾಡಿದ ಸಾರಜನಕ ಮತ್ತು ರಂಜಕಯುಕ್ತ ಗೊಬ್ಬರಗಳಲ್ಲಿ ಶೇಕಡ ೨೫ರಷ್ಟು ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಬಳಸುವ ವಿಧಾನ
ಮಿಶ್ರಣದೊಂದಿಗೆ: ೫ ಕೆ.ಜಿ ಅರ್ಕಾ ಸೂಕ್ಷಾ÷್ಮಣು ಜೀವಿಗಳ ಸಮೂಹವನ್ನು ೫೦೦ ಕೆ.ಜಿ ಕೊಟ್ಟಿಗೆ ಗೊಬ್ಬರ ಅಥವಾ ೨ ಕೆ.ಜಿ ಅರ್ಕಾ ಸೂಕ್ಷಾ÷್ಮಣು ಜೀವಿಗಳ ಸಮೂಹವನ್ನು ೧೦೦ ಕೆ.ಜಿ ಕಹಿಬೇವಿನ ಹಿಂಡಿಯ ಜೊತೆ ಚೆನ್ನಾಗಿ ಮಿಶ್ರಣ ಮಾಡಿ. ಕಾಳುಮೆಣಸು ಬೆಳೆಗಳಿಗೆ ಉಪಯೋಗಿಸಬೇಕು.
ನೇರವಾಗಿ ಬೆಳೆಗಳಿಗೆ: ೪ ಕೆ.ಜಿ ಅರ್ಕಾ ಸೂಕ್ಷಾ÷್ಮಣು ಜೀವಿಗಳ ಸಮೂಹ ಮತ್ತು ಒಂದು ಕೆ.ಜಿ ಬೆಲ್ಲವನ್ನು ೨೦೦ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ. ಗಿಡದ ಬುಡ ಭಾಗಕ್ಕೆ ನೇರವಾಗಿ (೪ ರಿಂದ ೫ ಲೀಟರ್‌ನಷ್ಟು) ಮೇ-ಜೂನ್, ಆಗಸ್ಟ್ ಮತ್ತು ನೆವೆಂಬರ್ ತಿಂಗಳಿನಲ್ಲಿ ಸುರಿಯಬೇಕು.
ಮಾಹಿತಿಗಾಗಿ ಸಂಪರ್ಕಿಸಿ: ಹಿರಿಯ ವಿಜ್ಞಾನಿ ಮತ್ತು ಮುಖ್ಯಸüರು, ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ದೂರವಾಣಿ: ೦೮೨೭೪-೨೪೭೨೭೪.
Thursday, 15 July 2021
ದೊಡ್ಡ ಗಾಂಧಾರಿ ಮೆಣಸು... ಬರಹ:ಕೂಡಂಡ ರವಿ, ಕೊಡಗು.
ಬರಹ:ಕೂಡಂಡ ರವಿ, ಕೊಡಗು.
ಗಾಂಧಾರಿ ಮೆಣಸನ್ನು ಹೋಲುವ ಇದು ದೊಡ್ಡ ಗಾತ್ರದ ಮೆಣಸು. ಹಸಿರು ಬಣ್ಣದ ಕಾಯಿಗಳು, ಕೆಂಪು ಬಣ್ಣದ ಹಣ್ಣುಗಳು.
ಇದೇ ಜಾತಿಯ ನೀಲಿ ಮತ್ತು ಬಿಳಿ ಬಣ್ಣದ ದೊಡ್ಡ ಗಾತ್ರದ ಗಾಂಧಾರಿ ಮೆಣಸುಗಳ ತಳಿಗಳು ಸಹಾ ಇವೆ. ‘ದೊಡ್ಡ ಗಾಂಧಾರಿ’ ಅಥವಾ ‘ದೊಡ್ಡ ಸೂಜಿಮೆಣಸು’. ಕಾಯಿ ಒಂದೂವರೆಯಿAದ ಒಂದೂ ಮುಕ್ಕಾಲು ಇಂಚು ಉದ್ದ. ತುದಿ ಚೂಪು. ತೀಕ್ಷ÷್ಣ ಖಾರ ಹೊಂದಿಲ್ಲ. ವಿಶಿಷ್ಟ ಪರಿಮಳ. ಚಟ್ನಿ,s ಸಂಡಿಗೆ, ಪಲ್ಯ, ಮಜ್ಜಿಗೆ ಹುಳಿಗೆ ಬಳಸಿದರೆ ಸ್ವಾದ ಇನ್ನೂ ಅಧಿಕ. ಹಣ್ಣಾದ ಕಾಯಿಗಳನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಬಳಸಬಹುದು. ಇದನ್ನು ಕೃಷಿ ಮಾಡಿ ಬೆಳೆಸುವವರು ಕಡಿಮೆ. ಹಕ್ಕಿಗಳು ತಿಂದು ಬೀಜ ಪ್ರಸಾರ ಮಾಡುವ ಮೂಲಕ ವಂಶಾಭಿವೃದ್ಧಿಯಾಗುತ್ತದೆ. ಜಾಗ ಕಡಿಮೆ ಇದ್ದವರು ಕುಂಡಗಳಲ್ಲಿ ಕೂಡ ಬೆಳೆಯಬಹುದು. ರೋಗ, ಕೀಟಬಾಧೆ ಇಲ್ಲ. ಗಿಡ ನೆಟ್ಟು ಮೂರು ತಿಂಗಳಲ್ಲಿ ಮೆಣಸು ಕೊಯ್ಯಬಹುದು. ಹೆಚ್ಚು ಆರೈಕೆ ಬೇಡದ ಸ್ವಾದಿಷ್ಟ ರುಚಿಯ ದೊಡ್ಡ ಗಾಂಧಾರಿಯನ್ನು ನೀವು ಸುಲಭವಾಗಿ ಬೆಳೆಯಬಹುದು. ಕೊಡಗು ಜಿಲ್ಲೆಯ ಹಲವಾರು ಕಡೆ ಕಾಫಿ ತೋಟಗಳಲ್ಲಿ ಮನೆಯ ಹಿತ್ತಲಲ್ಲಿ ಇದನ್ನು ಧಾರಾಳವಾಗಿ ಕಾಣಬಹುದು. ಇದನ್ನು ವಾಣಿಜ್ಯ ಉದ್ದೇಶಕ್ಕೆ ಬೆಳೆಯುವ ಪ್ರಯತ್ನ ಎಲ್ಲೂ ನಡೆದ ಉದಾಹರಣೆಗಳು ಕಾಣಬರುತ್ತಿಲ್ಲ. ವೈನ್‌ಗೂ ಇದನ್ನು ಬಳಸುತ್ತಿರುವರು. ಕಸಿಗಿಡಕ್ಕೆ ಬೇರು ಗಿಡವಾಗಿ (ಸ್ಟಾಕ್) ಆಗಿ ಬಳಸಬಹುದಾಗಿದೆ. ಚೆನ್ನಾಗಿ ಆರೈಕೆ ಮಾಡಿದ್ದಲ್ಲಿ ಹಲವಾರು ವರ್ಷಗಳ ಕಾಲ ನಿರಂತರವಾಗಿ ಫಸಲು ಪಡೆಯಬಹುದು. ಹೈಬ್ರಿಡ್ ಮೆಣಸುಗಳ ಭರಾಟೆಯಲ್ಲಿ ಈ ತಳಿ ಅಳಿವಿನಂಚಿನಲ್ಲಿದೆ.
ಆಸಕ್ತರು ಇದನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಿದ್ದಲ್ಲಿ ಇದು ಮುಂದಿನ ಪೀಳಿಗೆಗೂ ವರ್ಗಾವಣೆಯಾದೀತು.
Wednesday, 14 July 2021
ವಿಶ್ವಪ್ರಸಿದ್ಧ ಗಿರ್ ಹಸು
ಕೂಡಂಡ ಧರಣಿ. ಹೊದ್ದೂರು-ಮೂರ್ನಾಡು.
ಭಾರತೀಯ ಮೂಲದ ಹಲವಾರು ಜಾತಿಯ ಹಸುಗಳು ವಿಶ್ವದಲ್ಲಿ ಹೆಸರುಗಳಿಸಿವೆ. ಇದರಲ್ಲಿ ಗಿರ್ ಕೂಡಾ ಒಂದು. ಗಿರ್ ಹಸು ಮೂಲತಃ ಗುಜರಾತಿನದ್ದು, ಇದು ದಕ್ಷಿಣ ಏಷ್ಯಾದ ಜೆಬು ಜಾನುವಾರುಗಳಲ್ಲಿ ಒಂದು. ಹಸುವಿನ ದೇಹದ ಬಣ್ಣವು ಕೆಂಪು, ಇಲ್ಲವೇ ಕೆಂಪು ಬಿಳಿ ಮಿಶ್ರಿತವಾದ ಮಚ್ಚೆಗಳಿಂದ ಕೂಡಿ ಹೊಳೆಯುತ್ತಿರುತ್ತದೆ. ಚರ್ಮವು ಅತ್ಯಂತ ಮೃದು.
ಈ ಹಸುವಿಗೆ ಭೋಡಾಲಿ, ಗುಜರಾತಿ, ಸೋರ್ತಿ, ಸರತಿ ಎಂಬ ಹೆಸರುಗಳಿವೆ.
ವೈಶಿಷ್ಟ್ಯಗಳೇನು ?
ಗುಜರಾತಿನ ಅಮ್ರೆಲಿ, ಭಾವನಗರ, ಜುನಾಗ, ರಾಜ್‍ಕೋಟ್ ಜಿಲ್ಲೆಗಳಲ್ಲಿ ಈ ಹಸುಗಳಿವೆ. ಇದು ತನ್ನ ವೈವಿಧ್ಯಮಯ ಗುಣಗಳಿಂದ ಹೆಸರು ವಾಸಿಯಾಗಿದೆ. ವಿಶ್ವಪ್ರಸಿದ್ಧಿಯನ್ನು ಪಡೆದಿದೆ.
ಇದು ಆಹಾರ ಕೊರತೆಯ ನಡುವೆಯೂ ಅಧಿಕ ಹಾಲು ನೀಡುವ ಸಾಮಾಥ್ರ್ಯವನ್ನು ಹೊಂದಿದೆ. ಹವಾಮಾನ ವೈಪರೀತ್ಯಗಳನ್ನು ಗಿರ್ ಸಮರ್ಥವಾಗಿ ಎದುರಿಸಬಲ್ಲದು. ವಿವಿಧ ರೋಗಗಳ ನಿರೋಧಕ ಗುಣಗಳನ್ನು ಹೊಂದಿವೆ. ಇಂತಹ ಗುಣಗಳಿಂದ ಇವುಗಳನ್ನು ಹಲವಾರು ದೇಶಗಳು ಆಮದು ಮಾಡಿಕೊಂಡು ಸಾಕುತ್ತಿವೆ. ಬ್ರೆಜಿಲ್, ಅಮೇರಿಕಾ, ವೆನಿಜುವೆಲಾ, ಮೆಕ್ಸಿಕೋ ದೇಶಗಳಲ್ಲಿವೆ ಗಿರ್ ಹೆಸರು ಪಡೆದಿವೆ. ಅತ್ಯಂತ ದೊಡ್ಡ ಗಾತ್ರದ ಈ ಹಸುವಿನ ತೂಕ ಸರಾಸರಿ 385 ಕಿಲೋಗ್ರಾಂಗಳು. ಹೋರಿಯ ತೂಕ ಸರಾಸರಿ 545 ಕಿಲೋಗ್ರಾಂಗಳು. ಗಿರ್ ಹಸುವಿನ ವಾರ್ಷಿಕ ಹಾಲಿನ ಇಳುವರಿ 1590 ಕಿಲೋಗ್ರಾಂಗಳು ! ಪ್ರತೀ ದಿನ ಸರಾಸರಿ 6 ರಿಂದ 15 ಲೀಟರ್ ಹಾಲು ನೀಡುತ್ತವೆ. ಗಿರ್ ಭಾರತದ ಅತ್ಯಂತ ಪ್ರಾಚೀನ ತಳಿ. ಇದರ ಹಾಲಿಗೆ ಅತ್ಯಂತ ಬೇಡಿಕೆ. ಇದರ ಸಗಣಿ- ಗಂಜಲ ಜೀವಾಮೃತ ತಯಾರಿಕೆಗೆ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟಿದೆ. ಗಿರ್ ಹಸುವಿನ ಸರಾಸರಿ ಬೆಲೆ ಸುಮಾರು 80 ಸಾವಿರದಿಂದ 1 ಲಕ್ಷದ ಹತ್ತು ಸಾವಿರ.
ಭಾರತದಲ್ಲಿಯೂ ಇವುಗಳನ್ನು ವ್ಯಾಪಕವಾಗಿ ಸಾಕಲಾಗುತ್ತಿದೆ. ಮಹರಾಷ್ಟ್ರ, ಕರ್ನಾಟಕ, ರಾಜಸ್ಥಾನಗಳಲ್ಲಿ ಅನೇಕ ಮಂದಿ ಆಸಕ್ತರು ಇವುಗಳನ್ನು ಸಾಕುತ್ತಿರುವರು. ನಮ್ಮ ದೇಶದ ವಿವಿಧೆಡೆ ಇವುಗಳನ್ನು ಸಾಕುವ ಪ್ರಯತ್ನಗಳು ನಡೆಯುತ್ತಿವೆ.
ಉಚಿತ ಕೃತಕ ಗರ್ಭಧಾರಣೆ
ನೀವು ಮಿಶ್ರ ತಳಿ ಅಥವಾ ವಿದೇಶಿ ತಳಿಗಳ ಹಸುಗಳನ್ನು ಸಾಕುತ್ತಿರುವಿರಾ ? ಹಾಗಿದ್ದಲ್ಲಿ ಅದೇ ಹಸುವಿನಿಂದ ಗಿರ್ ತಳಿಯ ಕರುಗಳನ್ನು ಪಡೆಯಬಹುದು. ಮಾಹಿತಿಗಾಗಿ ನಿಮ್ಮ ಸಮೀಪದ ಪಶು ವೈದ್ಯ ಆಸ್ಪತ್ರೆಗಳನ್ನು ಸಂಪರ್ಕಿಸಬಹುದು. ಕೊಡಗಿನಲ್ಲಿಯೂ ಕೃತಕ ಗರ್ಭಧಾರಣೆಯ ಮೂಲಕ ಈ ಕರುಗಳು ಜನಿಸಿವೆ ಎಂದು ಪಶು ಸಂಗೋಪನಾ ಇಲಾಖೆಯ ಮೂರ್ನಾಡಿನ ಮಹಿಳಾ ವೈದ್ಯೆ ಡಾ. ಶಿಲ್ಪಾ ಮಾಹಿತಿ ನೀಡಿದ್ದಾರೆ. ಹೊದ್ದೂರಿನ ಪ್ರಗತಿಪರ ಕೃಷಿಕ ಚೌರೀರ ಉದಯ ಅವರು ಗಿರ್ ತಳಿಯ ಹಸುಗಳನ್ನು ಯಶಸ್ವಿಯಾಗಿ ಸಾಕುತ್ತಿರುವರು. ಆಸಕ್ತರು ಅಪ್ಪಟ ಗಿರ್ ತಳಿಯ ಹಸು-ಕರುವಿಗಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಪುರ ಮಠವನ್ನು ಸಂಪರ್ಕಿಸಬಹುದು.
ವಿದೇಶಿ ತಳಿಗಳ ಹಸುಗಳನ್ನು ಸಾಕಿ ಸೋತ ಗೋಪಾಲಕರು ಈ ತಳಿಯನ್ನು ಸಾಕಿ ಯಶಸ್ಸು ಪಡೆಯಬಹುದು. ಒಮ್ಮೆ ಪ್ರಯತ್ನಿಸಿ ನೋಡಿ.
Tuesday, 13 July 2021
ರೈತ ಮಾರುಕಟ್ಟೆಗೆ ಬೇಕಿದೆ ಆಮ್ಲಜನಕ... !
ಬರಹ: ಕೂಡಂಡ ರವಿ, ಹೊದ್ದೂರು, ಕೊಡಗು.
ರೈತರ ಏಳಿಗೆಯನ್ನೇ ಪ್ರಮುಖ ಉದ್ಧೇಶವಾಗಿರಿಸಿಕೊಂಡ (ಅಗ್ರಿಕಲ್ಚರಲ್ ಮರ‍್ಕೇಟಿಂಗ್ )ಎಪಿಸಿಎಂಸಿ ರೈತರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬುದು ಬಹುತೇಕರು ಕಂಡುಕೊAಡ ಕಟು ಸತ್ಯ. ಇಲ್ಲಿ ಲಾಭವೇ ಪ್ರಮುಖ ಉದ್ಧೇಶವೇ ಆಗಿದೆ. ಇದರಿಂದ ಇಂತಹ ಸಂಸ್ಥೆಯನ್ನು ನಂಬಿ ರೈತಾಪಿ ವರ್ಗದವರು ಬದುಕು ಕಟ್ಟಿಕೊಳ್ಳುವುದು ಕಷ್ಟವೇ ... ಇದಕ್ಕೆ ಸಂಬAಧಿಸಿದ ಕಾನೂನು ತಿದ್ದುಪಡಿಯಿಂದ ಬೆಳೆಗಾರರಿಗೆ ಪ್ರಯೋಜನ ಶೂನ್ಯ.
ದಲ್ಲಾಳಿಗಳಿಗೆ ಅವಕಾಶವೇ ಇಲ್ಲ !
ಇದನ್ನು ಬದಲಾಯಿಸಲು ರೈತರು ಕಂಡುಕೊAಡ ಮಾರ್ಗಕ್ಕೆ ನಿರಂತರ ಆಮ್ಲಜನಕ ತುಂಬುವ ಕಾರ್ಯ ನಡೆಯಬೇಕಿದೆ. ಇದರಲ್ಲಿ ವಿಶೇಷವೆಂದರೆ, ಮೂರನೇ ಮಂದಿಗೆ (ದಲ್ಲಾಳಿಗೆ ಅವಕಾಶವೇ ಇಲ್ಲ) ಪರಿಣಾಮ ಕಡಿಮೆ ಬೆಲೆಯಲ್ಲಿ ರೈತರಿಂದ ನೇರವಾಗಿ ಬಳಕೆದಾರರಿಗೆ ಉತ್ಪನ್ನಗಳು ತಲುಪುತ್ತಿವೆ. ಇದಕ್ಕೆ ಕೆಲ ಉದಾಹರಣೆಗಳೆಂದರೆ, ಹಲಸು ಉತ್ಸವ, ಅಣಬೆ ಉತ್ಸವ, ಗೆಣಸು ಉತ್ಸವ ಇತ್ಯಾದಿ. ಮಡಿಕೇರಿಯ ಎಪಿಸಿಎಂಸಿ ಮಾರುಕಟ್ಟೆಯಲ್ಲಿ ನಡೆದ ಪ್ರಾಯೋಗಿಕ ಸಂತೆ. ಇಲ್ಲಿ ರೈತರು ಬೆಳೆದ ಕೆಸದ ಗೆಡ್ಡೆ, ನಾಟಿ ಕೋಳಿ, ಕಾಡು ಉತ್ಪನ್ನಗಳಾದ ಕಣಿಲೆ, ಅಣಬೆಗಳು ಸೇರಿದಂತೆ ರೈತರೇ ಬೆಳೆದ ತಾಜಾ ತರಕಾರಿಗಳಿದ್ದವು. ಮಹಿಳೆಯರೇ ಮಾರಾಟಗಾರರು. ನಗರದ ಬಹುತೇಕ ಖರೀದಿದಾರರು ಮುಗಿಬಿದ್ದು ತಾಜಾ ತರಕಾರಿಗಳನ್ನು ಖರೀದಿಸುತ್ತಿರುವ ದೃಶ್ಯ ಕಾಣಬಂದಿತ್ತು.
ಹಲವಾರು ಕಡೆಗಳಲ್ಲಿ ರಾಷ್ಟç, ರಾಜ್ಯ, ಜಿಲ್ಲಾ, ತಾಲೂಕು ಮಟ್ಟದಲ್ಲಿ ಕೃಷಿ ಮೇಳಗಳು ಆಯೋಜಿತವಾಗುತ್ತವೆ. ಇಂತಹ ಕಡೆಗಳಲ್ಲಿ ರೈತ ಮಾರುಕಟ್ಟೆ ಆಯೋಜನೆಯಾಗುತ್ತವೆ. ಇಂತಹ ಕಡೆ ರೈತಾಪಿ ವರ್ಗದವರೇ ಮಾರಾಟಗಾರರು. ಬಹುತೇಕ ಖರೀದಿದಾರರು ಅವರೇ. ಕೃಷಿಮೇಳಗಳ ಮಾರುಕಟ್ಟೆಯಲ್ಲಿ ಅಂಗಡಿ ತೆರೆಯಲು ಬೆಳೆಗಾರರು ಸುಂಕ ಕೊಡಬೇಕಿಲ್ಲ. ಅಥವಾ ಇದ್ದರೂ ತೀರಾ ಕಡಿಮೆ. ಹಲವಾರು ಕಡೆಗಳಲ್ಲಿ ರೈತರಿಗಾಗಿ ಬಾಡಿಗೆ ರಹಿತ ಮಳಿಗೆಗಳು ಇರುತ್ತವೆ. ಇಂತಹ ಅವಕಾಶಗಳನ್ನು ರೈತಾಪಿವರ್ಗದವರು, ರೈತಕೂಟಗಳು, ಸಂಘಟನೆಗಳು ಯಶಸ್ವಿಯಾಗಿ ಬಳಸಿಕೊಳ್ಳುವ ಅವಶ್ಯಕತೆ ಇದೆ.
ಕೆಲ ಉದಾಹರಣೆಗಳು
ನನ್ನ ಮಿತ್ರ, ಗೋಣಿಕೊಪ್ಪ ವಿಭಾಗದವರು. ಹಳ್ಳಿಭಾಗದಲ್ಲಿ ಸಿಗುವ ಹಲಸು, ಕರಿಬೇವು, ಬೆಣ್ಣೆಹಣ್ಣು, ಕೆಸ, ಕಣಿಲೆ, ಉಪ್ಪಿನಕಾಯಿ, ಕಾಫಿಪುಡಿ, ಸೊಪ್ಪು-ಸದೆಗಳನ್ನು ವಿವಿಧ ಜಿಲ್ಲೆ, ರಾಜ್ಯ ಮತ್ತು ರಾಷ್ಟç ಮಟ್ಟದ ಕೃಷಿ ಮೇಳಗಳಲ್ಲಿಯೂ ಮಾರಾಟ ಮಾಡುವ ಹವ್ಯಾಸವನ್ನು ಮೈಗೂಡಿಸಿಕೊಂಡಿರುವರು. ಮತ್ತೋರ್ವರು ಪುತ್ತೂರಿನ ಮಿತ್ರರು, ವಿವಿಧ ಹಲಸಿನ ಜಾತಿಯ ಕಸಿ ಗಿಡಗಳನ್ನು, ಬರೇ ಕೃಷಿ ಮೇಳಗಳಲ್ಲಿ ಮಾರಾಟ ಮಾಡುವರು. ಇನ್ನೋರ್ವರು ದಾವಣಗೆರೆಯವರು-ಸೋಲಾರ್ ಕೀಟನಾಶಕ ಯಂತ್ರಕ್ಕೆ ಕೃಷಿ ಮೇಳಗಳ ಮೂಲಕವೇ ಮಾರುಕಟ್ಟೆ ಕಂಡುಕೊAಡರು !
ಮನೆಬಾಗಿಲಿಗೆ ದಾಂಗುಡಿ
ಹಲವಾರು ನಗರಗಳಲ್ಲಿ ಸಾವಯವ ಮಾರುಕಟ್ಟೆಗಳು ಭರ್ಜರಿ ಯಶಸ್ಸು ಕಾಣುತ್ತಿವೆ. ಲಾಕ್‌ಡೌನ್ ಸಂದರ್ಭದಲ್ಲAತೂ ದಲ್ಲಾಳಿಗಳಿಲ್ಲದೆ ರೈತರೇ ತಾವು ಬೆಳೆದ ಉತ್ಪನ್ನಗಳನ್ನು ರೈತರಿಗೆ ನೇರವಾಗಿ ತಲುಪಿಸಲು ಸುವರ್ಣಾವಕಾಶವನ್ನು ಕಲ್ಪಿಸಿತ್ತು. ಹಲವಾರು ಕೃಷಿ ಉತ್ಪನ್ನಗಳು ಹೊಲ-ತೋಟಗಳಿಂದ ಬಳಕೆದಾರರ ಮನೆಬಾಗಿಲಿಗೆ ದಾಂಗುಡಿ ಇಟ್ಟಿತು. ಹತಾಶಗೊಂಡ ರೈತಾಪಿ ವರ್ಗದವರಿಗೆ ಅವಕಾಶದ ಹೆಬ್ಬಾಗಿಲನ್ನು ಮುಕ್ತವಾಗಿ ತೆರೆಯಿತು. ಇದರಿಂದ ಸಿಕ್ಕಬೆಲೆಗೆ ರೈತರು ಕೃಷಿ ಉತ್ಪನ್ನಗಳನ್ನು ಮಾರುವುದು ತಪ್ಪಿತು. ಇಂತಹ ಅವಕಾಶಗಳನ್ನು ಬಳಸಿಕೊಂಡು ರೈತ ಪರ ಸಂಘಟನೆಗಳು ಮುಂದಡಿ ಇಡಬೇಕಿದೆ.









